ನಾನು ಮುಸ್ಲಿಂ ಆದರೆ ರಾಮಾಯಣದ ಸಂಗೀತ ಸಂಯೋಜನೆ ಮಾಡುತ್ತಿದ್ದೇನೆ: ಎ.ಆರ್. ರೆಹಮಾನ್ – “ನಾನು ಬ್ರಾಹ್ಮಣರ ಶಾಲೆಯಲ್ಲಿ ಓದಿದ್ದೆ, ಒಳ್ಳೆಯ ವಿಷಯಗಳನ್ನು ನಾನು ಮೌಲ್ಯಮಟ್ಟಕ್ಕೆ ತೆಗೆದುಕೊಳ್ಳುತ್ತೇನೆ”

ಬಾಲಿವುಡ್ ಅವರ ಮುಂದಿನ ಸಿನಿಮಾ ರಾಮಾಯಣಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮಾತನಾಡಿದ್ದಾರೆ. ಈ ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ಮತ್ತು ಪ್ರಮುಖ ಪಾತ್ರಗಳಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಇದ್ದಾರೆ.
BBC Asian ಯೂಟ್ಯೂಬ್ ಚಾನೆಲ್ ನಲ್ಲಿ ನಡೆದ ಸಂದರ್ಶನದಲ್ಲಿ, ನಿರೂಪಕಿ ರೆಹಮಾನ್ ಅವರನ್ನು ಕುರಿತು “ನೀವು ಒಂದು ವಿಭಿನ್ನ ಧರ್ಮಕ್ಕೆ ಸೇರಿದವರು, ಆದರೂ ಹಿಂದೂ ಧರ್ಮದ ರಾಮಾಯಣ ಕಥೆಗೆ ಸಂಗೀತ ಸಂಯೋಜನೆ ಮಾಡಿತಿದ್ದೀರ . ಅವರ ಧಾರ್ಮಿಕ ನಂಬಿಕೆ ಪ್ರಭಾವ ಬೀರಿದೆಯೇ?” ಎಂದು ಕೇಳಲಾಯಿತು.

ಅದಕ್ಕೆ ಅವರು “ನಾನು ಮುಸ್ಲಿಂ, ಆದರೆ ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೆ, ಅಲ್ಲಿ ನಮಗೆ ಪ್ರತಿ ವರ್ಷ ರಾಮಾಯಣ ಮತ್ತು ಮಹಾಭಾರತ ಕಥೆ ಹೇಳಲಾಗುತ್ತಿತ್ತು,ಹಾಗಾಗಿ ನನಗೆ ಕಥೆ ಗೊತ್ತು. ಈ ಕಥೆಯಲ್ಲಿ ಒಳ್ಳೆಯ ವ್ಯಕ್ತಿತ್ವ, ಉನ್ನತ ಆದರ್ಶಗಳು ಇವೆ. ಅದಕ್ಕೆ ನಾನು ಮಹತ್ವ ನೀಡುತ್ತೇನೆ. ಜನರು ವಾದಿಸಬಹುದು, ಆದರೆ ಒಳ್ಳೆಯ ವಿಷಯಗಳನ್ನು ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಏನು ತಪ್ಪು ..?,”
ಪ್ರವಾದಿಗಳು ಹೇಳುತ್ತಾರೆ — “ಜ್ಞಾನವು ಅಮೂಲ್ಯ, ನೀವು ಅದನ್ನು ಎಲ್ಲಿಂದ ಪಡೆದರೂ ಪರವಾಗಿಲ್ಲ, ಅದು ರಾಜನಿಂದಾದರು ಸರಿ ಅಥವ ಭಿಕ್ಷುಕನಿಂದಾದರು ಸರಿ. ನೀವು ವಿಷಯಗಳಿಂದ ದೂರ ಸರಿಯಲು ಸಾಧ್ಯವಿಲ್ಲ. “
ರೆಹಮಾನ್ ಮುಂದುವರೆಸಿ “ನಾವು ಸಣ್ಣತನ ಮತ್ತು ಸ್ವಾರ್ಥದಿಂದ ಮೇಲೇರಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ಉನ್ನತೀಕರಿಸಿದಾಗ ಮಾತ್ರ ಪ್ರಕಾಶಮಾನವಾಗುತ್ತೇವೆ. ಇಡೀ ಯೋಜನೆಯ ಬಗ್ಗೆ ನನಗೆ ಹೆಮ್ಮೆ ಇದೆ, ಪ್ರಾಚೀನ ಭಾರತೀಯ ಸಂಸ್ಕೃತ ಮಹಾಕಾವ್ಯ ರಾಮಾಯಣದ ಸಾರ ವಿಶ್ವವ್ಯಾಪಿ ಹರಡಲಿದೆ .”

ಹ್ಯಾಂಜ್ ಜಿಮ್ಮರ್ ಯಹೂದಿ, ನಾನು ಮುಸ್ಲಿಂ ಮತ್ತು ರಾಮಾಯಣವು ಹಿಂದೂ ಸಂಸ್ಕೃತ ಮಹಾಕಾವ್ಯ. ಇವು ನಾನಾ ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತದೆ.”
ಹಾಲಿವುಡ್ ರಿಪೋರ್ಟ್‍ರ್ ಜೊತೆ ಮತ್ತೊಂದು ಸಂದರ್ಶನದಲ್ಲಿ, ರೆಹಮಾನ್ ಹೇಳಿದರು: “ ಇದು ಒಂದು ದೊಡ್ಡ ಹೊಣೆಗಾರಿಕೆಯ ಕೆಲಸವಾಗಿದೆ. ಏಕೆಂದರೆ ನಾವು ಜಗತ್ತಿಗೆ ತುಂಬಾ ಸಾಂಪ್ರದಾಯಿಕ ಮತ್ತು ಮುಖ್ಯವಾದ ಒಂದು ಮಹಾಕಾವ್ಯದ ಕಥೆಯನ್ನು ತೋರಿಸಲು ಪ್ರಯತ್ನಿಸುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನಿಗೂ ಪರಿಚಿತವಾದ ಕಥೆ. ನಮಗೆ ಅದಕ್ಕೆ ಹೊಸ ತರಹದ ಸಂಗೀತ ಕೊಡುವ ಮೊದಲು, ಜ್ಞಾನವನ್ನು ಪಡೆದು ಕೊಳ್ಳುವುದರ ಮೇಲೆ ಗಮನ ಕೊಡಬೇಕು”. ಎಂದು ಹೇಳಿದರು.
